ಕರ್ನಾಟಕ

ರಾಜಗೋಪಾಲ್ ನಗರ ವಾರ್ಡಿನ ಜಿ ಬಿ ಎ ಆಕಾಂಕ್ಷಿ ಬಿ ಜಗದೀಶ್ ಕುಮಾರ್ ಅವರ ಜನ್ಮದಿನ ಆಚರಣೆ

ಮೂಲಕ News Desk | ಪ್ರಕಟಿಸಲಾಗಿದೆ June 9, 2026 June 9, 2026 | 12:20 PM 17 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ :ರಾಜಗೋಪಾ ಲನಗರ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಬಿಎ ಪ್ರಬಲ ಆಕಾಂಕ್ಷಿ ಬಿ.ಜಗದೀಶ್ ಕುಮಾರ್ ಅವರ ಹುಟ್ಟು ಹಬ್ಬಕ್ಕೆ ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕರಾದ ಆರ್. ಮಂಜುನಾಥ್ ಅವರು ಅಪಾರ ಬೆಂಬಲಿಗರೊಂದಿಗೆ ಅವರ ನಿವಾಸಕ್ಕೆ ಆಗಮಿಸಿ ಬೃಹತ್ ಹೂ ಮಾಲೆ ಹಾಕಿ ಕೇಕ್ ತಿನ್ನಿಸಿ ಮೈಸೂರ್ ಪೇಟ ತೋರಿಸಿ ಹಣ್ಣಿನ ಬುಟ್ಟಿ ನೀಡಿ ಪರಿಸರದ ದಿನದ ಅಂಗವಾಗಿ ಗಿಡವನ್ನು ನೀಡುವ ಮೂಲಕ ಜನ್ಮದಿನದ ಶುಭ ಕೋರಿದರು.


ಈ ಸಂದರ್ಭದಲ್ಲಿ ಹೆಗ್ಗನಹಳ್ಳಿ  ಕಾಂಗ್ರೆಸ್ ಮುಖಂಡರಾದ ಬ ನಾ ರವಿ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ, ಹನುಮಂತರಾಜು, ಕಾಂಗ್ರೆಸ್ ಹಿರಿಯ ಮುಖಂಡ ಮಣಿ, ಮುಖಂಡರುಗಳಾದ ಭೈರವ, ಕಿಶೋರ್, ಮಹಿಳಾ ಮುಖಂಡರುಗಳಾದ ಉಷಾರಾಜ್,

ಚಂದ್ರಮ್ಮ, ಬಿಟಿಎಂ ಲೇಔಟ್ ರಾಜು, ಮೋಹನ, ಲಗ್ಗೆರೆ ಮಂಜುನಾಥ್, ಸಮಾಜ ಸೇವಕರಾದ ಸೋಮಣ್ಣ,  ಕೃಷ್ಣ ಶೆಟ್ಟಿ, ಮೆಡಿಕಲ್ ಮಂಜುನಾಥ್, ಸೈಯದ್, ಬಸವರಾಜು, ರಾಜು ಹಾಗೂ ಜೆಡಿಎನ್ ಕುಟುಂಬಸ್ಥರು ಮುಂತಾದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಹುಟ್ಟುಹಬ್ಬಕ್ಕೆ ಶುಭ ಕೋರಿದರು.

ವರದಿ : ಪಬ್ಲಿಕ್ ರೈಡ್ ದೇವರಾಜ್