ಕರ್ನಾಟಕ

ಬ.ನಾ.ರವಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಶ್ರೀ ಶ್ರೀ ಸಿದ್ದರಾಮಚೈತನ್ಯ ಸ್ವಾಮೀಜಿ

ಮೂಲಕ News Desk | ಪ್ರಕಟಿಸಲಾಗಿದೆ June 16, 2026 June 16, 2026 | 12:11 PM 73 ವೀಕ್ಷಣೆಗಳು
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಹುಟ್ಟುಹಬ್ಬಗಳು ಸಾದನೆಯ ಸಂಕೇತವಾಗಬೇಕು ಮತ್ತಷ್ಟು ಸಾಧಿಸಲು ಪೇರಣೆಯಾಗಬೇಕು.ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಭಿತ್ತಿ ಸಮಾಜ ಸೇವೆಯಲ್ಲಿ ತೊಡಗಿ ತನ್ನ ಸುತ್ತಮುತ್ತಲಿನ ಜನರಿಗ ಸಹಾನುಭೂತಿ ಹೊಂದಿರುತ್ತಾರೋ ಅವರು ಜಗತ್ತಿನಲ್ಲಿ ಉತ್ತಮ ಎಂದು ಹೆಸರುವಾಸಿಯಾಗುತ್ತಾರೆ ಅಂತವರ ಸಾಲಿನಲ್ಲಿ ಬ ನಾ ರವಿ ಸೇರುತ್ತಾರೆ ಅವರು ನೂರ್ಕಾಲ ಅರೋಗ್ಯವಾಗಿ ಬಾಳಲಿ ಎಂದು ಶ್ರೀ ಶ್ರೀ ಸಿದ್ದರಾಮಚೈತನ್ಯ ಸ್ವಾಮೀಜಿ ಶುಭ ಕೋರಿ ಅರ್ಶೀವಾದ ಮಾಡಿದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿಯ ಪ್ರಭಾವಿ ಕಾಂಗ್ರೆಸ್ ಮುಖಂಡ ಉದ್ಯಮಿ,ವಿದ್ಯಾಭೂಷಣ್ ವಿದ್ಯಾಸಂಸ್ಥೆಯಸಂಸ್ಥಾಪಕ,ಮಾನವೀಯತೆಯುಳ್ಳ,ಸದಾಹಸನ್ಮುಖಿ,ಸಾಧನೆಯ ಹರಿಕಾರ ಬ.ನಾ.ರವಿಗೆ ಜನ್ಮದಿನದ ಸಂಭ್ರಮದಲ್ಲಿ ಕುಣಿಗಲ್ ತಾಲ್ಲೂಕಿನ ಕಿತ್ತಲಿನಾಗಮಂಗಲ ಅರೇಶಂಕರಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಸಿದ್ದರಾಮಚೈತನ್ಯ ಸ್ವಾಮೀಜಿ ಭಾಗವಹಿಸಿ ಬ.ನಾ.ರವಿ ಹಾಗೂ ಪಾರ್ವತಿ ಬ.ನಾ.ರವಿ ದಂಪತಿಗಳಿಗೆ ಸನ್ಮಾನಿಸಿ ಅರ್ಶೀವದಿಸಿ ಶುಭಕೋರಿದರು.

ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿ ಒಬ್ಬ ರೈತನ ಮಗನಾಗಿ ಬೆಂಗಳೂರಿಗೆ ಬಂದ ಬ.ನಾ ರವಿ ಅರ್ಥಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಸದೃಡವಾಗಿ ಎಲ್ಲರ ವಿಶ್ವಾಸಗಳಿಸಿ ಬೆಳೆಯುವುದು ಸುಲಭದ ಮಾತಲ್ಲ ಯೋಗ ಯೋಗ್ಯತೆ ಅಷ್ಟು ಸುಲಭವಾಗಿ ಒಲಿಯುವಿದಿಲ್ಲ ಅಂತಹ ಎಲ್ಲಾ ಯೋಗ್ಯತೆಗಳನ್ನು ಸಂಪಾದಿಸಿ 
ಜನಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತಿನ ಸಿಪಾಯಿಯಾಗಿ ಈಗಾಗಲೇ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ, ಮುಂದೆ ಬರುವ ಜಿಬಿಎ ಆಕಾಂಕ್ಷಿಯಾಗಿದ್ದು ಹೆಗ್ಗನಹಳ್ಳಿ ಜನತೆಯ ಅರ್ಶೀವಾದವಿರಲಿ ಎಂದರು.

ಈ ಸಂಧರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಮೋಹನ್ ಕುಮಾರ್, ರೂಪ ಲಿಂಗೇಶ್ವರ್,ಹೆಗ್ಗನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ,
ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಜೆಡಿಎನ್ ಜಗದೀಶ್,ಚಲನಚಿತ್ರ ನಿರ್ಮಾಪಕ ದೇವರಾಜ್,ರಾಜ್ಯಕಾರ್ಮಿಕ ವಿಭಾಗ ರಾಜ್ಯ ಕಾರ್ಯದರ್ಶಿ ಎವಿ ರಂಗರಾಜ್, ಹೆಗ್ಗನಹಳ್ಳಿ ಕಾಂಗ್ರೆಸ್ ಮುಖಂಡ ರಮೇಶ್ ಗೌಡ,
ಕಾಂಗ್ರೆಸ್ ಪಕ್ಷದ ಸಂಯೋಜಕ ಎಸ್ಸಿ ಎಸ್ಟಿ ರಮೇಶ್,ಕಾರ್ಮಿಕ ಘಟಕದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಮೈಕಲ್ ಬಾಬು,
ಶಿವಪುರ ವಾರ್ಡಿನ ಜಿಬಿಎ ಆಕಾಂಕ್ಷಿ ವಿ ಡಿ ಚಿಕ್ಕಣ್ಣ , ಬ ನಾ ಮಧು ಕುಮಾರ್,ಬ ನಾ ಗಿರೀಶ್, ಡಾ.ಅಂಬೇಡ್ಕರ್ ಅಭಿಮಾನಿಗಳ ವೇದಿಕೆ ರಾಜ್ಯಾಧ್ಯಕ್ಷ ಉಮೇಶ್ ರಾವಣ್, ರಾಜ್ಯ ಸಂಚಾಲಕ ರಮೀಜ್ , ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ರಾಜ್ಯಅಧ್ಯಕ್ಷರು ಹೇಮಾ ರಾಜೇಂದ್ರನ್,
ಶಿಲ್ಪರಾಣಿ,ಸಲ್ಮಾ, ಹೇಮಾ,ತಾಸೀನಾ ಭಾನು,ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿ ಶುಭ ಕೋರಿದರು.