ಕರ್ನಾಟಕ

15ನೇ ಆಗಸ್ಟ್ ಸ್ವಾತಂತ್ರ್ಯ ದಿನಾಚರಣೆ – ಗ್ರಾಮ ಪಂಚಾಯತ ಕಣಗಲಾ

ಮೂಲಕ News Desk | ಪ್ರಕಟಿಸಲಾಗಿದೆ August 16, 2026 August 16, 2026 | 01:57 PM 81 ವೀಕ್ಷಣೆಗಳು


ಕಣಗಲಾ ಗ್ರಾಮ ಪಂಚಾಯತ್ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು.


ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗ್ರಾಮ ಪಂಚಾಯತ ಆವರಣದಲ್ಲಿ ರಾಷ್ಟ್ರಧ್ವಜಾರೋಹಣವನ್ನು ಗ್ರಾಮ ಪಂಚಾಯತ ಆಡಳಿತಾಧಿಕಾರಿಯಾದ ನೇಮಕವಾಗಿರುವ  ಶ್ರೀ ಪ್ರಶಾಂತ ಮುನ್ನೋಳಿ ಸರ್ ಇವರು ನೆರವೇರಿಸಿದರು .ಸರಿ ಕಾರ್ಯಕ್ರಮದಲ್ಲಿ ಕಣಗಲಾ ಗ್ರಾಮದ ಆಜಿ-ಮಾಜಿ ಸೈನಿಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು,, ಸದಸ್ಯರು,  ಪಂಚಾಯತ ಅಭಿವೃದ್ಧಿ ಅಧಿಕಾರಿ, ಸದಸ್ಯರು, ಗ್ರಾಮಸ್ಥರು ಹಾಗೂ ಗಣ್ಯರು ಉಪಸ್ಥಿತರಿದ್ದರು.


ನಂತರ ರಾಷ್ಟ್ರಗೀತೆ ಹಾಡಿ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ವೀರರನ್ನು ಸ್ಮರಿಸಲಾಯಿತು.


ಕಾರ್ಯಕ್ರಮದಲ್ಲಿ ಇತ್ತಿಚಿಗೆ 17 ವರ್ಷಗಳ ಕಾಲ ದೇಶಕ್ಕಾಗಿ ಸೇವೆ ಸಲ್ಲಿಸಿ ಬಂದಿರುವ ಮಾತನಾಡಿದ ಮಾಜಿ ಸೈನಿಕರಾದ  ಶ್ರೀ ಉಮೇಶ ಗುರವ ಹಾಗೂ ಅಮಿತ ಹಸೂರೆ ಇವರು ಮಾತನಾಡಿ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬ ನಾಗರಿಕರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಗ್ರಾಮಗಳ ಅಭಿವೃದ್ಧಿ, ಸ್ವಚ್ಛತೆ, ಶಿಕ್ಷಣ ಹಾಗೂ ಸಾಮಾಜಿಕ ಏಕತೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರು, ಅಧಿಕಾರಿಗಳು, ಶಾಲಾ ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು,  ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ಅದೇ ತರನಾಗಿ ಈ ಕಾರ್ಯಕ್ರಮದ ನಂತರ ಕಣಗಲಾ ಗ್ರಾಮದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮಾ ವೃತ್ತವನ್ನು ಸಹ ಲಕ್ಷ್ಮೀ ಗಲ್ಲಿಯ ವಾಳಕಿ ರಸ್ತೆಯಲ್ಲಿರುವ ಶ್ರೀ ಕುಂತಿನಾಥ ಕಮತೆ ಇವರ ಮನೆಯ ಹತ್ತಿರ ಉದ್ಘಾಟನೆ ಮಾಡಲಾಯಿತು. ಸದರಿ ಉದ್ಘಾಟನೆಯನ್ನು ಶ್ರೀ ಅಣ್ಣಾವೃ ರೇಂಗಟೆ, ಶ್ರೀ ಅಶೋಕ ಹಿರೆಕೋಡಿ, ಶ್ರೀ ರಾಜು ಆದಪ್ಪಾ ಕಮತೆ, ಸಿದ್ದು ಕರಿಗಾರ, ಮಾರುತಿ ನಾಯಿಕ, ಶಂಕರ ಕಲ್ಯಾಣಿ, ಅಣ್ಣಪ್ಪಾ ಕೋರೆ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.


ವರದಿಗಾರರು:ಸಂತೋಷ ನಿರ್ಮಲೆ (ಬೆಳಗಾವಿ)